![](https://suddione.com/content/uploads/2021/10/bjp-1.jpg)
ಬೆಂಗಳೂರು: 27 ವರ್ಷಗಳ ಬಳಿಕ ದೆಹಲಿಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಯನ್ನು ಏರಿದೆ. ಆಪ್ ಮತ್ತು ಕಾಂಗ್ರೆಸ್ ಅನ್ನು ಸೋಲಿಸಿ, ಬಿಜೆಪಿ ಗೆದ್ದು ಬೀಗಿದೆ. ರಾಜ್ಯದಲ್ಲೂ ಈ ಸಂಭ್ರಮವನ್ನು ಸೆಲೆಬ್ರೇಟ್ ಮಾಡಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಪಟಾಕಿ ಸಿಡಿಸಿ, ಸಿಹಿ ಹಂಚಿ, ಕುಣಿದು ಕುಪ್ಪಳಿಸಿದ್ದಾರೆ.
ಈ ಗೆಲುವಿನ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿದ್ದಾರೆ. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಅಭಿನಂದನೆ ಸಲ್ಲಿಸುತ್ತೇನೆ. ದೆಹಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಬೇಕು, ನರೇಂದ್ರ ಮೋದಿ ಜೀಯವರ ಕೈಯನ್ನು ಬಲಪಡಿಸಬೇಕು ಎಂಬ ಆಶಯದಿಂದ ಇಂದು ಮತ್ತೊಮ್ಮೆ ನಮಗೆ ಆಶೀರ್ವಾದ ಮಾಡಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಆಂದೋಲನ ಮಾಡಿ ಅಧಿಕಾರಕ್ಕೆ ಬಂದಿದ್ದ ಕೇಜ್ರಿವಾಲ್ ಅವರ ಮುಖವಾಡ ಕಳಚಿಬಿದ್ದಿದೆ. ಕಾಂಗ್ರೆಸ್ ಪಕ್ಷ ಹ್ಯಾಟ್ರಿಕ್ ಸಾಧನೆ ಮಾಡಿದೆ. ಅಂದ್ರೆ ಸತತ ಮೂರನೇ ಬಾರಿಗೆ ದೆಹಲಿಯಲ್ಲಿಯೇ ಸೋಲು ಕಂಡಿದೆ ಎಂದಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಡಿಕೆ ಶಿವಕುಮಾರ್ ಅವರು ಗ್ಯಾರಂಟಿಯ ಅಂಬಾಸಿಡರ್ ಅಂತ ಹೇಳಿದ್ರು. ಯಾವ ದೇಶಕ್ಕೆ ಹೋಗ್ತಾರೆ ಅಂತ ಗೊತ್ತಿಲ್ಲ ಡಿಕೆ ಶಿವಕುಮಾರ್ ಅವರು. ಕೇಜ್ರಿವಾಲ್ ಅವರನ್ನೇ ಗೆಲ್ಲಿಸುವುದಕ್ಕೆ ಆಗಿಲ್ಲ. ಆ ಸ್ಥಿತಿ ಕರ್ನಾಟಕದ ಗ್ಯಾರಂಟಿ ಪಾಡು ಮುಂದೆ ಏನಾಗುತ್ತದೆ ಎಂಬುದಕ್ಕೆ ಉದಾಹರಣೆಯಾಗಿದೆ. ಕೇಜ್ರಿವಾಲ್ ಅಪ್ಪನ ಮನೆ ದುಡ್ಡಲ್ಲ. ಜನರ ಟ್ಯಾಕ್ಸ್ ದುಡ್ಡಲ್ಲಿ ಇವರು ಮಜಾ ಮಾಡ್ತಾ ಇದ್ದದ್ದನ್ನು ನೋಡಿದ ಮೇಲೆ, ಯಮುನಾ ನದಿ ಮಲೀನ ಎಂದು ಗಂಗೆ ಮೇಲೆ ಅಪವಾದ ಹೊರಿಸಿದರು. ಇದು ಕೂಡ ಜನರಿಗೆ ಹರ್ಟ್ ಮಾಡಿತ್ತು. ಒಬ್ಬ ಮುಖ್ಯಮಂತ್ರಿಯಾಗಿ ಜೈಲಿಗೆ ಹೋದ ಮೇಲೆ ರಾಜೀನಾಮೆ ಕೊಟ್ಟು ಹೋಗಬೇಕಿತ್ತು. ಎರಡ್ಮೂರು ತಿಂಗಳು ಆಡಳಿತವೇ ನಡೆದಿರಲಿಲ್ಲ. ಅಭಿವೃದ್ಧಿಯ ಫೈಲ್ ಗಳು ಮೂವ್ ಆಗಿರಲೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಜೊತೆಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಕೋಟಾ ಶ್ರೀನಿವಾಸ ಪೂಜಾರಿ, ಛಲವಾದಿ ನಾರಾಯಣ ಸ್ವಾಮಿ ಕೂಡ ದೆಹಲಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.
source https://suddione.com/bjp-at-the-helm-of-power-in-delhi-what-did-the-state-leaders-say/
0 Comments
If u have any queries, Please let us know