![](https://suddione.com/content/uploads/2025/02/Karehalli-Ullas-1024x570.webp)
ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ.ಫೆ. 08 : ಒಂದು ಕಾಲದಲ್ಲಿ ಚಿತ್ರದುರ್ಗ ಕಾಂಗ್ರೆಸ್ ಭದ್ರ ಕೋಟೆಯಾಗಿತ್ತು. ತದ ನಂತರ ಇದರ ಹಿಡಿತ ಸಡಿಲಗೊಂಡಿತ್ತು ಈಗ ಮತ್ತೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‍ನ್ನು ಗೆಲ್ಲಿಸುವುದು ನಮ್ಮ ಗುರಿಯಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ತಿಳಿಸಿದ್ದಾರೆ.
ಇತ್ತೀಚೆಗೆ ಚಿತ್ರದುರ್ಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾರೇಹಳ್ಳಿ ಉಲ್ಲಾಸ್ ರವರು 17703 ಮತಗಳನ್ನು ಪಡೆದು ತಮ್ಮ ಪ್ರತಿ ಸ್ಪರ್ಧಿಯಿಂದ 6512 ಮತಗಳ ಅಂತರದಿಂದ ಜಯಗಳಿಸಿದರು. ನಂತರ ಇಂದು ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಅವರನ್ನು ಅದ್ದೂರಿಯಾಗಿ ಸ್ವಾಗತ ಮಾಡಿದ ಯುವ ಕಾಂಗ್ರೆಸ್ ಪಡೆಗೆ ಧನ್ಯವಾದ ಅರ್ಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾರೇಹಳ್ಳಿ ಉಲ್ಲಾಸ್ ಕಳೆದ ಒಂದು ತಿಂಗಳಿನಿಂದ ಯುವ ಕಾಂಗ್ರೆಸ್ ಕಾರ್ಯಕರ್ತರ ನೊಂದಾಣಿಯನ್ನು ಮಾಡಿಸಲಾಗಿದ್ದು, ತದ ನಂತರ ಒಂದು ತಿಂಗಳು ಚುನಾವಣೆಯನ್ನು ಎದುರಿಸಲಾಯಿತು. 30 ದಿನಗಳ ಕಾಲ ನಮ್ಮ ಯುವ ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಕಡೆಗಳಲ್ಲಿ ಓಡಾಡುವುದರ ಮೂಲಕ ಸದಸ್ಯತ್ವವನ್ನು ಮಾಡುವುದರ ಮೂಲಕ ಸ್ವಿಚ್ಚೆಯಿಂದ ನಾನು ಮತ್ತೋಮ್ಮೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷನಾಗಲು ಸಹಕಾರ ನೀಡಿದ್ದಾರೆ ರಾಜ್ಯದಲ್ಲಿಯೇ ಅತಿ ಹೆಚ್ಚು ಮತಗಳಿಂದ ನನ್ನನ್ನು ಗೆಲ್ಲಿಸಿದ್ದಾರೆ ಎಂದರು.
ಕಳೆದ ಬಾರಿಯೂ ಸಹಾ ನಾನು ಅಧ್ಯಕ್ಷನಾಗಿದ್ದೆ, ಅಗ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಕ್ರಿಯವಾಗಿ ಸಂಘಟಿತರಾಗಿ ಯುವ ಕಾಂಗ್ರೆಸ್‍ನ್ನು ಸಂಘಟನೆ ಮಾಡುವುದರ ಮೂಲಕ ಸಕ್ರಿಯವಾಗಿದೆ. ಮುಂದಿನ ದಿನಮಾನದಲ್ಲಿ ಬರುವಂತ ಜಿ.ಪಂ.ತಾ.ಪಂ. ಹಾಗೂ ಸ್ಥಳಿಯ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಮತ್ತೋಮ್ಮೆ ಚಿತ್ರದುರ್ಗ ಕಾಂಗ್ರೆಸ್ ಭದ್ರ ಕೋಟೆ ಎಂದು ಸಾಬೀತು ಮಾಡಲಾಗುವುದು ಇದಕ್ಕಾಗಿ ನಮ್ಮ ಯುವ ಪಡೆಯನ್ನು ಸಕ್ರಿಯವಾಗಿ ಬಳಕೆ ಮಾಡಿಕೊಳ್ಳಲಾಗುವುದು. ಈ ಕಾರ್ಯ ನನ್ನ ಒಬ್ಬನಿಂದ ಸಾಧ್ಯವಿಲ್ಲ ಎಲ್ಲರ ಸಹಕಾರ,ಪ್ರೀತಿ, ವಿಶ್ವಾಸ ಸಹಾಯದಿಂದ ಮಾಡಲಾಗುವುದು. ಯುವ ಸಮೂಹ ನನಗೆ ಸಹಕಾರ ನೀಡಿದಲ್ಲಿ ಚಿತ್ರದುರ್ಗವನ್ನು ಮ್ತತೋಮ್ಮೆ ಕಾಂಗ್ರೆಸ್ ಭದ್ರ ಕೋಟೆಯನ್ನಾಗಿ ರೂಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ರವರಿಗೆ ಶಕ್ತಿಯಾಗಿ ರೂಪಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್ ತಿಳಿಸಿದ್ದಾರೆ.
ಡಿಸಿಸಿ ಅಧ್ಯಕ್ಷ ತಾಜ್‍ಪೀರ್ ಮಾತನಾಡಿ, ಜಿಲ್ಲಾಧ್ಯಕ್ಷರಾದ ಕಾರೇಹಳ್ಳಿ ಉಲ್ಲಾಸ್‍ರವರು ಜಿಲ್ಲೆಯಲ್ಲಿನ ಯುವ ಜನತೆಯನ್ನು ಕಾಂಗ್ರೆಸ್ ಕಾರ್ಯಕರ್ತರನ್ನಾಗಿ ಮಾಡುವುದರ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹುರುಪನ್ನು ತುಂಬಿದ್ದಾರೆ. ಯುವ ಜನಾಂಗವನ್ನು ವಿಶ್ವಾಸಕ್ಕೆ ತಗೆದುಕೊಂಡು ಅವರನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನಾಗಿ ಮಾಡುವುದರ ಮೂಲಕ ಚುನಾವಣೆಯಲ್ಲಿ ಬಹು ಮತಗಳಿಂದ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈಗ ಕಾಂಗ್ರೆಸ್ ಯುವ ಸದಸ್ಯರನ್ನು ಮುಂದಿನ ದಿನಮಾನದಲ್ಲಿ ಕಾಂಗ್ರೆಸ್ ಅಸ್ತಿಯನ್ನಾಗಿ ಮಾಡಬೇಕಿದೆ. ಸಂಘಟನೆಯನ್ನು ಬೆಳಸಿ ಮುಂದಿನ ಬಾವಿ ನಾಯಕರನ್ನು ನಿರ್ಮಾಣ ಮಾಡಬೇಕಿದೆ ಎಂದರು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪಕ್ಷದ ಮುಖಂಡರು, ಹಿತೈಷಿಗಳು ಭಾಗವಹಿಸಿದ್ದರು.
[Collection]
0 Comments
If u have any queries, Please let us know