![](https://suddione.com/content/uploads/2025/02/mahalakshmi-1024x570.webp)
ಚಿತ್ರದುರ್ಗ, ಫೆಬ್ರವರಿ. 08 : ದಾವಣಗೆರೆ ವಿಶ್ವವಿದ್ಯಾಲಯವು ನಡೆಸಿದ 2023-24ನೇ ಸಾಲಿನ ಬಿ.ಕಾಂ. ಪದವಿ ಪರೀಕ್ಷೆಯಲ್ಲಿ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ
ಮಹಾವಿದ್ಯಾಲಯದ ಟಿ. ಮಹಾಲಕ್ಷ್ಮಿ 5ನೇ ರ್ಯಾಂಕ್ ಗಳಿಸಿರುತ್ತಾರೆ ಎಂದು ಪ್ರಾಂಶುಪಾಲರಾದ ಡಾ.
ಎಸ್.ಹೆಚ್. ಪಂಚಾಕ್ಷರಿ ತಿಳಿಸಿದ್ದಾರೆ.
ಕಲಾ ವಿಭಾಗದಲ್ಲಿ ಉಜ್ಮಾ ಮರಿಯಂ, ಲೀಲಾ ಜಿ.ಎಂ., ಸಹನ ಟಿ. ಮತ್ತು ವಿಜ್ಞಾನ ವಿಭಾಗದಲ್ಲಿ
ತೇಜಸ್ವಿನಿ ವಿ., ಸಾರಿಯ ತೆಹರಿಂ, ಮೇಘನ ವಿ. ಹಾಗೂ ಕಾಮರ್ಸ್ ವಿಭಾಗದಲ್ಲಿ ಬಿಂದುಶ್ರೀ ಟಿ.,
ರಿಯಾ ಎಂ. ಬಾಫ್ನ, ಅಮೃತ ಎಂ. ಇವರುಗಳು ಶೇ.80ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿದ್ದು,
ಕಾಲೇಜಿಗೆ ಉತ್ತಮ ಫಲಿತಾಂಶ ಲಭ್ಯವಾಗಿರುತ್ತದೆ ಎಂದಿದ್ದಾರೆ.
5ನೇ ರ್ಯಾಂಕ್ ಗಳಿಸಿ ಕಾಲೇಜಿಗೆ ಕೀರ್ತಿಯನ್ನು ತಂದಿರುವ ಟಿ. ಮಹಾಲಕ್ಷ್ಮಿ ಅವರನ್ನು ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.
0 Comments
If u have any queries, Please let us know