ಬಿಸಿಸಿಐನಿಂದ 125 ಕೋಟಿ ಘೋಷಣೆ : ವಿಶ್ವಕಪ್ ನ ಪ್ರತಿ ಆಟಗಾರರಿಗೆ ಸಿಕ್ಕಿದ್ದೆಷ್ಟು ಕೋಟಿ..?

 

ವಿಶ್ವಕಪ್ ಮುಗಿದಿದೆ.. ಟೀಂ ಇಂಡಿಯಾ ಗೆಲುವು ಕಂಡಿದೆ.. ಇಡೀ ದೇಶವೇ ಖುಷಿಪಟ್ಟು, ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದರ ನಡುವೆ ಟೀಂ ಇಂಡಿಯಾ ಗೆದ್ದಾಗ ಬಿಸಿಸಿಐ ಕಡೆಯಿಂದ 125 ಕೋಟಿ ಬಹುಮಾನ ಘೋಷಣೆಯಾಗಿತ್ತು. ಈಗ ಈ ಹಣದಲ್ಲಿ ಯಾವೆಲ್ಲಾ ಆಟಗಾರರಿಗೆ ಎಷ್ಟು ಹಣ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಟೀಂ ಇಂಡಿಯಾದಲ್ಲಿ 15 ಆಟಗಾರರಿದ್ದಾರೆ. ಮೀಸಲು ಆಟಗಾರರು, ಕೋಚ್ ಹಾಗೂ ಸಪೋರ್ಟಿಂಗ್ ಆಟಗಾರರು ಸೇರಿ 42 ಮಂದಿ ಆಗ್ತಾರೆ. ಇಷ್ಟು ಜನಕ್ಕೆ ಹಣ ಹಂಚಿಕೆಯಾಗುತ್ತದೆ. 125 ಕೋಟಿಯಲ್ಲಿ ಮುಖ್ಯ ಕೋಚ್ ರಾಹಿಲ್ ದ್ರಾವಿಡ್, ಕ್ಯಾಪ್ಟನ್ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಟೀಂ ಇಂಡಿಯಾದಲ್ಲಿ ಆಡಿದ 15 ಮಂದಿಗೆ ತಲಾ 5 ಕೋಟಿ ಹಣ ಸಿಗುತ್ತದೆ. ವಿಶ್ವಕಪ್ ಗೆ ಮೀಸಲು ಆಟಗಾರರಾಗಿ ಆಯ್ಕೆಯಾದ ರಿಂಕು ಸಿಂಗ್, ಶುಭ್ಮನ್ ಗಿಲ್, ಆವೇಶ್ ಖಾನ್ ಹಾಗೂ ಖಲೀಲ್ ಅಹ್ಮದ್ ಗೆ ತಲಾ ಒಂದು ಕೋಟಿ ಹಣ ಸಿಕ್ಕಿದೆ.

ಬ್ಯಾಟಿಂಗ್‌ ಕೋಚ್‌ ವಿಕ್ರಮ್‌ ರಾಥೋಡ್‌, ಫೀಲ್ಡಿಂಗ್‌ ಕೋಚ್‌ ಟಿ. ದಿಲೀಪ್‌ ಕುಮಾರ್‌ ಹಾಗೂ ಬೌಲಿಂಗ್‌ ಕೋಚ್‌ ಪಾರಸ್‌ ಮಾಂಬ್ರೆಗೆ ತಲಾ 2.5 ಕೋಟಿ ಹಂಚಲಾಗಿದೆ. ಸೆಲೆಕ್ಷನ್​​ ಕಮಿಟಿ ಮುಖ್ಯಸ್ಥ ಅಜಿತ್​​ ಅಗರ್ಕರ್ ಸೇರಿ ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂ. ವಿತರಿಸಲಾಗಿದೆ. ಭಾರತ ತಂಡದ ಭಾಗವಾಗಿದ್ದ ಕಮಲೇಶ್ ಜೈನ್, ಯೋಗೇಶ್ ಪರ್ಮಾರ್, ತುಳಸಿ ರಾಮ್ ಯುವರಾಜ್, ರಾಘವಿಂದ್ರ ದಿವಿಗಿ, ನುವಾನ್ ಉದೆನೆಕೆ, ದಯಾನಂದ್ ಗರಾನಿ, ರಾಜೀವ್ ಕುಮಾರ್, ಅರುಣ್​​ ಕಾನಡೆ ಸೇರಿ ಸೋಹಮ್ ದೇಸಾಯಿಗೆ ತಲಾ 2 ಕೋಟಿ ನೀಡಲಾಗಿದೆ ಎಂದು ತಿಳಿದು ಬಂದಿದೆ.

The post ಬಿಸಿಸಿಐನಿಂದ 125 ಕೋಟಿ ಘೋಷಣೆ : ವಿಶ್ವಕಪ್ ನ ಪ್ರತಿ ಆಟಗಾರರಿಗೆ ಸಿಕ್ಕಿದ್ದೆಷ್ಟು ಕೋಟಿ..? first appeared on Kannada News | suddione.



source https://suddione.com/125-crore-announced-by-bcci-how-many-crores-did-each-player-of-the-world-cup-get/

Post a Comment

0 Comments